'7-8 ತಿಂಗಳಿಂದ ನನಗೂ ಸಾಕಾಗಿ ಹೋಗಿದೆ': ಸಂಭಾವ್ಯ 'ದಂಗೆ' ಕುರಿತು Bangladesh ಸೇನಾ ಮುಖ್ಯಸ್ಥ ಸುಳಿವು?
- Apr 8
- 2 min read
ಬಾಂಗ್ಲಾದೇಶದಲ್ಲಿ ಆಂತರಿಕ ಹಿಂಸಾಚಾರ ಮತ್ತು ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವಂತೆಯೇ ಆ ದೇಶದ ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಸಂಭಾವ್ಯ ಆಂತರಿಕ ದಂಗೆಯ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.

ಢಾಕಾ: ಮಹತ್ವದ ಬೆಳವಣಿಗೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮುಂದುವರೆದಿರುವಂತೆಯೇ ಅತ್ತ ಆ ದೇಶದ ಸೇನಾ ಮುಖ್ಯಸ್ಥ ಆಂತರಿಕ ದಂಗೆಯ ಸಾಧ್ಯತೆಯ ಕುರಿತು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಹೌದು.. ಬಾಂಗ್ಲಾದೇಶದಲ್ಲಿ ಆಂತರಿಕ ಹಿಂಸಾಚಾರ ಮತ್ತು ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವಂತೆಯೇ ಆ ದೇಶದ ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಸಂಭಾವ್ಯ ಆಂತರಿಕ ದಂಗೆಯ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್, 'ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ಸಂಭಾವ್ಯ ಬೆದರಿಕೆಯನ್ನು ನಾನು ಕಾಣುತ್ತಿದ್ದೇನೆ. ದೇಶವನ್ನು ಸುರಕ್ಷಿತ ಕೈಯಲ್ಲಿ ನೋಡುವುದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಆಕಾಂಕ್ಷೆಗಳಿಲ್ಲ. ಕಳೆದ 7-8 ತಿಂಗಳುಗಳಿಂದ ನನಗೂ ಸಾಕಾಗಿ ಹೋಗಿದೆ. ನಾಳೆ ನಾನು ನಿಮಗೆ ಹೇಳಿಲ್ಲ ಎಂದು ನೀವು ಹೇಳಬಾರದು. ಹೀಗಾಗಿ ನಾನು ನಿಮಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಬಾಂಗ್ಲಾದೇಶದಲ್ಲಿ ಹಾಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಸೂಚಿಸುತ್ತಿದ್ದಾರೆ. ಅಂತೆಯೇ ಬಾಂಗ್ಲಾದೇಶವನ್ನು ''ಬಾಹ್ಯ ಕೈಗಳು'' ಕುಶಲತೆಯಿಂದ ನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಬಾಂಗ್ಲಾದೇಶದ ಎಲ್ಲ ರಾಜಕೀಯ ಪಕ್ಷಗಳಿಗೂ ಅವರು ಸಂಭಾವ್ಯ ಚುನಾವಣೆ ಕುರಿತು ಸುಳಿವು ನೀಡಿದ್ದು, ಹಾಲಿ ಪರಿಸ್ಥಿತಿಯಲ್ಲಿ ಸಾರ್ವತ್ರಿಕ ಚುನಾವಣೆ ಅತ್ಯಗತ್ಯ. ಅಲ್ಲದೆ ತಾವು ಮತ್ತು ಬಾಂಗ್ಲಾದೇಶ ಸೇನೆ ಇದಕ್ಕೆ ಸಿದ್ಧರಾಗಿದ್ದೇವೆ ಎಂದು ಒತ್ತಿ ಹೇಳಿದ್ದಾರೆ.
ಸೇನಾಡಳಿತ ಹೇರಿಕೆ?
ಇದೇ ವೇಳೆ ಬಾಂಗ್ಲಾದೇಶದಲ್ಲಿ ಒಂದು ವೇಳೆ ಸಾರ್ವತ್ರಿಕ ಚುನಾವಣೆ ನಡೆಸಲು ಸಾಧ್ಯವಾಗದೇ ಇದ್ದರೆ ಆಗ ಸೇನೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲೂ ಸಿದ್ಧವಾಗಿದೆ. ಇದು ನಮ್ಮ ಮುಂದಿರುವ ಮತ್ತೊಂದು ಆಯ್ಕೆಯಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಕರ್-ಉಜ್-ಜಮಾನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
Advertisement
Powered by:
Advertisement: 0:10
ಕಳೆದ ವರ್ಷ ಆಗಸ್ಟ್‌ನಲ್ಲಿ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ನಡೆದು ಅಂದಿನ ಪ್ರಧಾನಿ ಶೇಖ್ ಹಸೀನಾ ದೇಶ ತೊರೆಯುವಂತಾಗಿತ್ತು. ಅಲ್ಲದೆ ಇದೇ ಬೆಳವಣಿಗೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ತೀವ್ರ ಮಟ್ಟದಲ್ಲಿ ಹದಗೆಡುವಂತೆ ಮಾಡಿದ್ದವು.
ಅಲ್ಲದೆ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದ ಕೆಲವು ದಿನಗಳ ನಂತರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ಅವರು ಪ್ರಸ್ತುತ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೇತೃತ್ವ ವಹಿಸುತ್ತಿದ್ದಾರೆ. ಅವರ ಆಡಳಿತಾವಧಿಯಲ್ಲೇ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಕೂಡ ಮುಂದುವರೆದಿದೆ.
ಯೂನಸ್ ನೇತೃತ್ವದ ಬಾಂಗ್ಲಾದೇಶ ಆಡಳಿತಕ್ಕೆ ಸ್ಪಷ್ಟ ಸಂದೇಶವೊಂದರಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ಬಾಂಗ್ಲಾದೇಶದಲ್ಲಿನ ಹಾಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರ ಢಾಕಾಗೆ ತಿಳಿಸಿದೆ ಎಂದು ಹೇಳಿದ್ದಾರೆ. ಅಂತೆಯೇ ಬಾಂಗ್ಲಾದೇಶವು "ಭಯೋತ್ಪಾದನೆಯನ್ನು ಸಾಮಾನ್ಯೀಕರಣಗೊಳಿಸಬಾರದು" ಎಂದು ಹೇಳಿದ್ದರು.
Comments