top of page

Pushpa 2; box office ಗಳಿಕೆ 1500 ಕೋಟಿ ರೂ ಗೇರಿಕೆ, ಈ ದಾಖಲೆ ಬರೆದ ಮೊದಲ ಚಿತ್ರ

  • Apr 8
  • 1 min read

ಡಿಸೆಂಬರ್‌ 5 ರಂದು ತೆರೆ ಕಂಡ ಪುಷ್ಪ 2 ಸಿನಿಮಾ ಇದುವರೆಗೂ ಯಾವ ಭಾರತೀಯ ಸಿನಿಮಾ ಮಾಡದ ದಾಖಲೆಯನ್ನು ಮಾಡಿದ್ದು, ರಿಲೀಸ್‌ ನಂತರ ಕಡಿಮೆ ಸಮಯದಲ್ಲಿ 500 ಕೋಟಿ, 1000 ಕೋಟಿ ರೂ ಕ್ಲಬ್‌ ಸೇರಿದ್ದ ಸಿನಿಮಾ ಈಗ 1500 ಕೋಟಿ ರೂ, ಕಲೆಕ್ಷನ್‌ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದೆ.

ree

ಹೈದರಾಬಾದ್: ನಟ ಅಲ್ಲು ಅರ್ಜುನ್ ಅಭಿನಯದ ಮತ್ತು ಸುಕುಮಾರ್ ನಿರ್ದೇಶನದ ಬ್ಲಾಕ್ ಬಸ್ಚರ್ ಚಿತ್ರ ಪುಷ್ಪ 2 ಬಾಕ್ಸಾಫಿಸ್ ಗಳಿಕೆ ಮತ್ತೊಂದು ದಾಖಲೆ ಬರೆದಿದ್ದು, ಚಿತ್ರದ ಗಳಿಕೆ ಇದೀಗ 1500 ಕೋಟಿ ರೂ ಗೆ ಏರಿಕೆಯಾಗಿದೆ.

ಹೌದು.. ಡಿಸೆಂಬರ್‌ 5 ರಂದು ತೆರೆ ಕಂಡ ಪುಷ್ಪ 2 ಸಿನಿಮಾ ಇದುವರೆಗೂ ಯಾವ ಭಾರತೀಯ ಸಿನಿಮಾ ಮಾಡದ ದಾಖಲೆಯನ್ನು ಮಾಡಿದ್ದು, ರಿಲೀಸ್‌ ನಂತರ ಕಡಿಮೆ ಸಮಯದಲ್ಲಿ 500 ಕೋಟಿ, 1000 ಕೋಟಿ ರೂ ಕ್ಲಬ್‌ ಸೇರಿದ್ದ ಸಿನಿಮಾ ಈಗ 1500 ಕೋಟಿ ರೂ, ಕಲೆಕ್ಷನ್‌ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದೆ.


ಈ ವಿಚಾರವನ್ನು ಮೈತ್ರಿ ಮೂವಿ ಮೇಕರ್ಸ್‌ ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ ಮೂಲಕ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ಕೇವಲ 14 ದಿನಗಳಲ್ಲಿ ವಿಶ್ವಾದ್ಯಂತ 1508 ಕೋಟಿ ರೂ, ಗ್ರಾಸ್‌ ಕಲೆಕ್ಷನ್‌ ಮಾಡಿದೆ ಎಂದು ಮೈತ್ರಿ ಮೂವಿ ಮೇಕರ್ಸ್‌, ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದೆ.

''ಬಾಕ್ಸ್ ಆಫೀಸ್ ನಲ್ಲಿ ಐತಿಹಾಸಿಕ ದಾಖಲೆ ಮುಂದುವರಿದಿದೆ. ಪುಷ್ಪ 2 ದಿ ರೂಲ್ ಈಗ ರೂ.1500 ಕೋಟಿ ಗಳಿಸಿದ ಅತ್ಯಂತ ವೇಗವಾಗಿ ಭಾರತೀಯ ಸಿನಿಮಾವಾಗಿದೆ. 14 ದಿನಗಳಲ್ಲಿ ರೂ.1508 ಕೋಟಿ ಕಲೆಕ್ಷನ್ ಮಾಡಿದೆ'' ಎಂದು ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾಗಿದೆ.


ಸಿನಿಮಾ ಮೊದಲ ಮೂರು ದಿನದಲ್ಲಿ 600 ಕೋಟಿ ರೂ, ಐದು ದಿನಗಳಲ್ಲಿ 900 ಕೋಟಿ ಮತ್ತು ಮೊದಲ ವಾರದಲ್ಲಿ 1000 ಕೋಟಿ ರೂ ಗಳಿಸಿತ್ತು. ಮೊದಲ ವಾರಾಂತ್ಯದ ವೇಳೆಗೆ ಮುಂಗಡ ಬುಕ್ಕಿಂಗ್‌ನಲ್ಲಿ 100 ಕೋಟಿ ರೂ.ಗಳ ಗಡಿ ದಾಟಿದೆ. ಈ ಸಿನಿಮಾ ತೆಲುಗು ಭಾಷೆಗಿಂತ ಹಿಂದಿಯಲ್ಲಿ ಹೆಚ್ಚು ಗಳಿಕೆ ಮಾಡುತ್ತಿದೆ. ಅಲ್ಲಿ ಈಗಾಗಲೇ 600 ಕೋಟಿ ರೂ ಗಿಂತ ಹೆಚ್ಚು ನಿವ್ವಳ ಕಲೆಕ್ಷನ್ ಮಾಡಿದೆ.

ಇದರ ಪ್ರಕಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಟಿಸಿದೆ. ಅಷ್ಟೇ ಅಲ್ಲ ಸ್ಟ್ರೀ 2 ದಾಖಲೆಯನ್ನೂ ಮುರಿದಿದೆ. ತೆಲುಗು ವರ್ಷನ್‌ 300 ಕೋಟಿ ರೂ. ಗೂ ಅಧಿಕ ಕಲೆಕ್ಷನ್‌ ಮಾಡಿದೆ ಎಂದು ಹೇಳಲಾಗಿದೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page