ಇರಾನ್‌ನಲ್ಲಿ 3 ಭಾರತೀಯರು ನಾಪತ್ತೆ; ಟೆಹ್ರಾನ್ ಜತೆ ಕೇಂದ್ರ ನಿರಂತರ ಸಂಪರ್ಕದಲ್ಲಿದೆ
- Apr 8
- 1 min read
"ಭಾರತೀಯರ ನಾಪತ್ತೆ ವಿಷಯವನ್ನು ದೆಹಲಿಯಲ್ಲಿರುವ ಇರಾನಿನ ರಾಯಭಾರ ಕಚೇರಿ ಮತ್ತು ಟೆಹ್ರಾನ್‌ನಲ್ಲಿರುವ ಇರಾನಿನ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ"

ನವದೆಹಲಿ: ಇರಾನ್‌ನಲ್ಲಿ ಮೂವರು ಭಾರತೀಯ ಪ್ರಜೆಗಳು ಕಾಣೆಯಾಗಿದ್ದು, ಭಾರತ ಈ ವಿಷಯವನ್ನು ಟೆಹ್ರಾನ್ ಗಮನಕ್ಕೆ ತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.
"ಭಾರತೀಯರ ನಾಪತ್ತೆ ವಿಷಯವನ್ನು ದೆಹಲಿಯಲ್ಲಿರುವ ಇರಾನಿನ ರಾಯಭಾರ ಕಚೇರಿ ಮತ್ತು ಟೆಹ್ರಾನ್‌ನಲ್ಲಿರುವ ಇರಾನಿನ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚಿಸಲಾಗಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿದ್ದಾರೆ.
"ವಿದೇಶಾಂಗ ಸಚಿವಾಲಯ ಮತ್ತು ಟೆಹ್ರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಇರಾನಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಕಾಣೆಯಾದ ಪ್ರಜೆಗಳನ್ನು ಪತ್ತೆಹಚ್ಚಲು ಹಾಗೂ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಕೋರಿದೆ" ಎಂದು ಅವರು ತಿಳಿಸಿದ್ದಾರೆ.


Comments