top of page

ಹೌದು... ನಾನು ಬೋಲ್ಡ್ ಇರಬಹುದು, ಅದರರ್ಥ ಮುಟ್ಟಿ ಚಪಲ ತೀರಿಸಿಕೊಳ್ಳಿ ಅಂತಲ್ಲ: ಮೌನ ಮುರಿದ ಪಾಕ್ ಮಾಡೆಲ್, ವಿಡಿಯೋ ನೋಡಿ!

  • Apr 8
  • 1 min read

ಮತಿರಾ ಮೊಹಮ್ಮದ್ ಅವರನ್ನು ಚಾಹತ್ ಫತೇಹ್ ತಬ್ಬಿಕೊಂಡು ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವೇಳೆ ಮತಿರಾ ಆತನೊಂದಿಗೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೂ ಕಸಿವಿಸಿಗೊಂಡಂತೆ ಕಾಣುತ್ತಿದ್ದಳು.

ree

ಮುಂಬೈ: ಪಾಕಿಸ್ತಾನಿ ಪ್ರಭಾವಿ ಮತಿರಾ ಮೊಹಮ್ಮದ್ ಸಂದರ್ಶನವೊಂದರಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು ಸಂಗೀತ ಸಂಯೋಜಕ, ಮಾಜಿ ಕ್ರಿಕೆಟಿಗ ಚಾಹತ್ ಫತೇಹ್ ಅಲಿ ಖಾನ್ ತಮ್ಮ ಟಾಕ್ ಶೋ 'ದಿ 21 ಎಂಎಂ ಶೋ' ನಲ್ಲಿ ಕಾಣಿಸಿಕೊಂಡಾಗ 'ಅನುಚಿತವಾಗಿ' ವರ್ತಿಸಿದ್ದು 'ಕಿರುಕುಳ' ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಮತಿರಾ ಮೊಹಮ್ಮದ್ ಅವರನ್ನು ಚಾಹತ್ ಫತೇಹ್ ತಬ್ಬಿಕೊಂಡು ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ವೇಳೆ ಮತಿರಾ ಆತನೊಂದಿಗೆ ನಗುತ್ತಾ ಫೋಟೋಗಳಿಗೆ ಪೋಸ್ ನೀಡುತ್ತಿದ್ದರೂ ಕಸಿವಿಸಿಗೊಂಡಂತೆ ಕಾಣುತ್ತಿದ್ದಳು. ಈ ಘಟನೆಯ ಬಗ್ಗೆ ಮೌನ ಮುರಿದ ಮಥಿರಾ, ಚಾಹತ್ ಅವರನ್ನು ಟೀಕಿಸಿ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.


ಚಾಹತ್ ಅವರ ಕಾರ್ಯದ ಬಗ್ಗೆ ಮತಿರಾ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ತಾನು ಯಾವಾಗಲೂ ತನ್ನ ಅತಿಥಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ. ಆದರೆ ಆ ವೀಡಿಯೊವನ್ನು ತನಗೆ ತಿಳಿಯದೆ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ ತನ್ನ ಒಪ್ಪಿಗೆಯಿಲ್ಲದೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓರ್ವ ಮಹಿಳೆಯಾಗಿ ನನ್ನನ್ನು ಸಾರ್ವಜನಿಕವಾಗಿ ಯಾರಾದರೂ ಅಪ್ಪಿಕೊಂಡರೆ, ನನಗೆ ತುಂಬಾ ಕಸಿವಿಸಿಯಾಗುತ್ತದೆ. ನನ್ನ ಅನುಮತಿಯಿಲ್ಲದೆ ಅವರು ವಿಡಿಯೋ ಏಕೆ ಪೋಸ್ಟ್ ಮಾಡಿದರು? ನನಗೆ ಅರ್ಥವಾಗುತ್ತಿಲ್ಲ ಎಂದು ಮತಿರಾ ಹೇಳಿದ್ದಾರೆ.


ನನಗೆ ತುಂಬಾ ನಿರಾಶೆಯಾಗಿದೆ. ಹೌದು... ನಾನು ಬೋಲ್ಡ್ ವ್ಯಕ್ತಿತ್ವದ ಮಹಿಳೆ, ಆದರೆ ನೀವು ನನ್ನನ್ನು ನೋಡಿದ ತಕ್ಷಣ ನನ್ನನ್ನು ತಬ್ಬಿಕೊಳ್ಳಿ ಅಥವಾ ನನ್ನ ಬೆನ್ನಿನ ಮೇಲೆ ಕೈ ಹಾಕುತ್ತೀರಿ ಎಂದು ಅರ್ಥವಲ್ಲ. ಅಚಾನಕ್ ಆಗಿ ಜನರು ನನ್ನೊಂದಿಗೆ ಈ ರೀತಿ ವರ್ತಿಸಿದರೆ ಕಿರಿಕಿರಿ ಉಂಟುಮಾಡುತ್ತದೆ. ನಾನು ಹಾಗೆ ನಡೆದುಕೊಂಡರೆ ಜನರು ನನ್ನನ್ನು ಅಶ್ಲೀಲ ಎಂದು ಕರೆಯುತ್ತಾರೆ. ಯಾರಾದರೂ ನನ್ನನ್ನು ಮುಟ್ಟುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲ, ಏಕೆಂದರೆ ಅದು ಸಾಮಾನ್ಯ ನಡವಳಿಕೆಯಲ್ಲ, ಮತ್ತು ನಾನು ಆಘಾತಕ್ಕೊಳಗಾಗಿದ್ದೆ. ಅಷ್ಟೇ ಅಲ್ಲದೆ ಅವರು, ವೀಡಿಯೊವನ್ನು ಪೋಸ್ಟ್ ಮಾಡುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ಅವರು ಪೋಸ್ಟ್ ಮಾಡಿದ್ದಾರೆ. ಇದರಿಂದ ನನಗೆ ಯಾವುದೇ ಭಾವನೆಗಳಿಲ್ಲ ಎಂದು ಜನರು ಭಾವಿಸುತ್ತಾರೆ. ಗಡಿಗಳನ್ನು ದಾಟುವುದು ಎಂದಿಗೂ ಸ್ವೀಕಾರಾರ್ಹವಲ್ಲ! ಅದು ನನಗೆ ತುಂಬಾ ಅಹಿತಕರ ಕ್ಷಣವಾಗಿತ್ತು, ಮತ್ತು ನಾನು ಅಲ್ಲಿಂದ ಹೊರಬರಲು ಬಯಸಿದ್ದೆ ಎಂದು ಹೇಳಿದ್ದಾರೆ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page